ಆಷಾಢದ ವಿಸ್ಮಯ ಕವನ ವೆಂಕಟೇಶ ಚಾಗಿ AASHHAADHA VISMAYA KAVITE VENKATESH CHAGI

 *ಆಷಾಢದ  ವಿಸ್ಮಯ**


(ಕವನ)

ಓಡುವ ಮೋಡಗಳು 
ಹೊತ್ತು ತರುತಲಿವೆ ಸಂದೇಶ
ಹೊಸ ಉಲ್ಲಾಸದ ಸಿಂಚನ
ನಿಸರ್ಗದೊಳಗೆ ಬೆರೆತಾಗ
ಹೊಸದೊಂದು ರೋಮಾಂಚನ
ಇದೆ ಏನು ಆಷಾಡದ ವಿಸ್ಮಯ ||

ಭಾವನೆಗಳಿಗೆ ಹೊಸ ಮೆರುಗು
ಬದುಕಿಗೆ ಹೊಸ ಚಿಗುರು
ಬೀಸು ಗಾಳಿಯ ಆ ಸಂದೇಶ
ಯಾರು ಕಳಿಸಿದರು ನಾ ಕಾಣೆ
ಮೋಡಗಳ ಮರೆಯಲ್ಲಿ ರವಿ
ಕ್ಷಣಗಳ  ಸವಿದನು ಆ ಕವಿ
ಇದೆ ಏನು ಆಷಾಡದ ವಿಸ್ಮಯ ||

ಮಳೆ ಹನಿಗಳೇ ಮುತ್ತುಗಳು
ಅರಳಿದೆ ಮುದುಡಿದ ಮನಸ್ಸು
ಯಾವ ಶಕ್ತಿ ಆವರಿಸಿತು
ಯಾರ ಕನಸಿದು ನನಸಾಯಿತು
ಕಾಣುವುದೆಲ್ಲಾ ವಿಸ್ಮಯ
ಅನುಭವಿಸುವವನೇ ತನ್ಮಯ
ಇದೇ ಏನು ಆಷಾಡದ ವಿಸ್ಮಯ ||


ಹಸಿರೆಲೆಗಳ ಅಂಚಿಂದ
ಮಳೆ ಹನಿಗಳು ಜಾರಿ ಜಾರಿ
ಮನದೊಳಗೆ  ಇಳಿಯುತಿವೆ
ತನುವನ್ನು ಕುಣಿಸುತಿವೆ
ಅಡಗಿಕೊಳ್ಳಲೇ ಈಗಲೇ
ನಿಸರ್ಗದ ಮಡಿಲಿನೊಳಗೆ
ಇದೇ ಏನು ಆಷಾಡದ ವಿಸ್ಮಯ ||

ಕಾಮೆಂಟ್‌ಗಳು