ನಾನು ಬದಲಾಗಲಾರೆ ಕವನ ವೆಂಕಟೇಶ ಚಾಗಿ nanu badalaagalaare kavite venkatesh chagi

 ನಾನು ಬದಲಾಗಲಾರೆ 


ಕವನ 

ಸುಳ್ಳಿನ ಬರದೆಯನು
ನನ್ನ ಮೇಲೆ ಹೊದಿಸಿದರೆ 
ನೀವು ಅಂದುಕೊಂಡಂತೆ 
ನಾನು ಬದಲಾಗಲಾರೆ 

ನನ್ನ ನಾಲಗೆಯ ಮೇಲೆ 
ಸುಳ್ಳಿನ ಬರೆಗಳನ್ನು ಹಾಕಿದರೇನು..
ನನ್ನ ನಾಲಗೆಯಿಂದ
ನೀವು ಅಂದಂತೆ ನುಡಿಸಿದರೂ
ನಾನು ಬದಲಾಗಲಾರೆ 

ಶತ ಶತಮಾನಗಳ 
ಶೋಷಣೆಯ ಗೂಡಿನಲ್ಲಿ 
ಶೋಷಣೆಗೆ ಒಳಗಾದ ನಾನು 
ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ 
ನಾನು ಬದಲಾಗಲಾರೆ 

ನಿಮಗೆ ಗೊತ್ತೇ..
ನನ್ನ ಕೋಟ್ಯಾನು ಕೋಟಿ ಕನಸುಗಳು 
ನನಸುಗಳಾಗಿಯೇ ಉಳಿದಿವೆ 
ಕನಸುಗಳಿಗೆ ಇಲ್ಲಿ ಬೆಲೆ ಇಲ್ಲದೆ 
ಬೆಳೆದು ಗಿಡಮರಗಳಾಗದೆ 
ಭೂಮಿಯಲ್ಲಿಯೇ ನಾಶವಾಗಿವೆ 
ನಿಮ್ಮ ಅನುಕಂಪದ ಅಲೆಯಿಂದ 
ನಾನು ಬದಲಾಗಲಾರೆ 

ನನ್ನ ಮೇಲೆ ಕಲ್ಲುಗಳನ್ನು ಹಾಕಿ
ರಕ್ತ ಬಸಿಯುವಂತೆ ಮಾಡಿ 
ಮನಸ್ಸನ್ನು ಗಟ್ಟಿಗೊಳಿಸಿರುವಿರಿ
ಮನುಷ್ಯತ್ವದ  ಮುಖವಾಡ
ಪ್ರತಿ ಹಗಲೂ ಇರುಳು ಧರಿಸುವಿರಿ
ನಿಮ್ಮ ತಾಯ್ತನದ ವಾತ್ಸಲ್ಯಕೆ
ನಾನು ಬದಲಾಗಲಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವರೇ, ನೀನೆಷ್ಟು ಒಳ್ಳೆಯವನು..!! | ಕವನ | ವೆಂಕಟೇಶ ಚಾಗಿ | Devare nineshtu olleyavanu | kavana | venkatesh chagi

ಆಷಾಢದ ವಿಸ್ಮಯ ಕವನ ವೆಂಕಟೇಶ ಚಾಗಿ AASHHAADHA VISMAYA KAVITE VENKATESH CHAGI

ನಿನ್ನ ಜಾತಿ ಯಾವ್ದು...? ಕವನ ವೆಂಕಟೇಶ ಚಾಗಿ NINNA JAATHI YAVDU KAVITE VENKATESH CHAGI