ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿನ್ನ ಜಾತಿ ಯಾವ್ದು...? ಕವನ ವೆಂಕಟೇಶ ಚಾಗಿ NINNA JAATHI YAVDU KAVITE VENKATESH CHAGI

    ನಿನ್ನ ಜಾತಿ ಯಾವ್ದು...? ***** (  ಕವನ  ) ನಿರ್ಮಲ ಆಗಸದಿಂದ ಜಿಗಿದು ಬಂದ ನಿರ್ಮಲ ಹನಿಗೆ ಮೊದಲ ಪ್ರಶ್ನೆ ಸಿದ್ದವಾಗಿದೆ ನಿನ್ನ ಜಾತಿ ಯಾವುದು...? ಅಲ್ಲಿಗೆ..... ಮೊದಲ ಮಲಿನ ಮೊದಲ ಇರಿತ ಮೊದಲ ಸಾವು  ಹುಟ್ಟಿದಾಗಲೆ..... ಇರಲಿ ಬಿಡು ಈ ಜಗವೇ ಹಾಗೆ ಮತ್ತೊಂದು ಚಕ್ರ ಹೆಜ್ಜೆಗಳ ಸದ್ದು ಅಡಗಿದೆ ಜಾತಿಯ ಧ್ವನಿಗೆ ನಗು... ಅಳು... ಸಿಟ್ಟು.... ದ್ವೇಷ... ಎಲ್ಲವೂ ಇರಿಯುತ  ಕೇಳಿವೆ ನಿನ್ನ ಜಾತಿ ಯಾವುದು... ಪೂಜೆ...ಮಡಿ... ಕೊಚ್ಚೆ...ಕೊಳೆ.. ಅಲ್ಲೂ ಇದೆ .. ಇಲ್ಲೂ ಇದೆ ಕಣ್ಣೀರಿಗೂ ಬೇಕಿತ್ತೆ ಜಾತಿಮುದ್ರೆ ನೀರಲ್ಲಿ ನೀರಾದಾಗ ಯಾವ ಹನಿಗಿದೆ ಜಾತಿ ಎಲ್ಲ ಕಣ್ಣಿನ ಬ್ರಾಂತಿ ಹಗಲು ... ಇರುಳು... ಛೇ.. ಇವುಗಳೂ ಇವೆಯಲ್ಲ ಕೇಳಿಬಿಡಿ .. ನಿಮ್ಮ ಜಾತಿ ಯಾವುದು.. ಹುಚ್ಚು ಹುಟ್ಟಿಬಿಟ್ಟಿದೆ ಎಂದೋ ಸಮುದ್ರವಾಗಿದೆ.. ಎಲ್ಲಾ ಹನಿಗಳ ಎಣಿಕೆ ಈಗ ಸಾಗಿದೆ ಪ್ರತಿ ಹನಿಗೂ ಜಾತಿಯ ಮುದ್ರೆ ಬಿದ್ದಿದೆ... ಆದರೆ.... ನೇಸರನ ನೆರಳಿಗೆ ಎಲ್ಲ ಸುಟ್ಟಿದೆ ಆಡಂಬರಗಳು.. ಆತಂಕಗಳು ಆ ಜಾತಿ.. ಈ ಜಾತಿ... ಯಾವುದೂ ಜತೆಗಿಲ್ಲ ಮತ್ತೆ ನಿರ್ಮಲ.... ಮತ್ತೆ ನಿರ್ಮಲ.... ಹನಿಯ ಪಯಣ ನಿರ್ಮಲದೆಡೆಗೆ..

ಆಷಾಢದ ವಿಸ್ಮಯ ಕವನ ವೆಂಕಟೇಶ ಚಾಗಿ AASHHAADHA VISMAYA KAVITE VENKATESH CHAGI

  *ಆಷಾಢದ  ವಿಸ್ಮಯ** ( ಕವನ ) ಓಡುವ ಮೋಡಗಳು  ಹೊತ್ತು ತರುತಲಿವೆ ಸಂದೇಶ ಹೊಸ ಉಲ್ಲಾಸದ ಸಿಂಚನ ನಿಸರ್ಗದೊಳಗೆ ಬೆರೆತಾಗ ಹೊಸದೊಂದು ರೋಮಾಂಚನ ಇದೆ ಏನು ಆಷಾಡದ ವಿಸ್ಮಯ || ಭಾವನೆಗಳಿಗೆ ಹೊಸ ಮೆರುಗು ಬದುಕಿಗೆ ಹೊಸ ಚಿಗುರು ಬೀಸು ಗಾಳಿಯ ಆ ಸಂದೇಶ ಯಾರು ಕಳಿಸಿದರು ನಾ ಕಾಣೆ ಮೋಡಗಳ ಮರೆಯಲ್ಲಿ ರವಿ ಕ್ಷಣಗಳ  ಸವಿದನು ಆ ಕವಿ ಇದೆ ಏನು ಆಷಾಡದ ವಿಸ್ಮಯ || ಮಳೆ ಹನಿಗಳೇ ಮುತ್ತುಗಳು ಅರಳಿದೆ ಮುದುಡಿದ ಮನಸ್ಸು ಯಾವ ಶಕ್ತಿ ಆವರಿಸಿತು ಯಾರ ಕನಸಿದು ನನಸಾಯಿತು ಕಾಣುವುದೆಲ್ಲಾ ವಿಸ್ಮಯ ಅನುಭವಿಸುವವನೇ ತನ್ಮಯ ಇದೇ ಏನು ಆಷಾಡದ ವಿಸ್ಮಯ || ಹಸಿರೆಲೆಗಳ ಅಂಚಿಂದ ಮಳೆ ಹನಿಗಳು ಜಾರಿ ಜಾರಿ ಮನದೊಳಗೆ  ಇಳಿಯುತಿವೆ ತನುವನ್ನು ಕುಣಿಸುತಿವೆ ಅಡಗಿಕೊಳ್ಳಲೇ ಈಗಲೇ ನಿಸರ್ಗದ ಮಡಿಲಿನೊಳಗೆ ಇದೇ ಏನು ಆಷಾಡದ ವಿಸ್ಮಯ ||

ನಾನು ಬದಲಾಗಲಾರೆ ಕವನ ವೆಂಕಟೇಶ ಚಾಗಿ nanu badalaagalaare kavite venkatesh chagi

  ನಾನು ಬದಲಾಗಲಾರೆ  ಕವನ   ಸುಳ್ಳಿನ ಬರದೆಯನು ನನ್ನ ಮೇಲೆ ಹೊದಿಸಿದರೆ  ನೀವು ಅಂದುಕೊಂಡಂತೆ  ನಾನು ಬದಲಾಗಲಾರೆ  ನನ್ನ ನಾಲಗೆಯ ಮೇಲೆ  ಸುಳ್ಳಿನ ಬರೆಗಳನ್ನು ಹಾಕಿದರೇನು.. ನನ್ನ ನಾಲಗೆಯಿಂದ ನೀವು ಅಂದಂತೆ ನುಡಿಸಿದರೂ ನಾನು ಬದಲಾಗಲಾರೆ  ಶತ ಶತಮಾನಗಳ  ಶೋಷಣೆಯ ಗೂಡಿನಲ್ಲಿ  ಶೋಷಣೆಗೆ ಒಳಗಾದ ನಾನು  ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ  ನಾನು ಬದಲಾಗಲಾರೆ  ನಿಮಗೆ ಗೊತ್ತೇ.. ನನ್ನ ಕೋಟ್ಯಾನು ಕೋಟಿ ಕನಸುಗಳು  ನನಸುಗಳಾಗಿಯೇ ಉಳಿದಿವೆ  ಕನಸುಗಳಿಗೆ ಇಲ್ಲಿ ಬೆಲೆ ಇಲ್ಲದೆ  ಬೆಳೆದು ಗಿಡಮರಗಳಾಗದೆ  ಭೂಮಿಯಲ್ಲಿಯೇ ನಾಶವಾಗಿವೆ  ನಿಮ್ಮ ಅನುಕಂಪದ ಅಲೆಯಿಂದ  ನಾನು ಬದಲಾಗಲಾರೆ  ನನ್ನ ಮೇಲೆ ಕಲ್ಲುಗಳನ್ನು ಹಾಕಿ ರಕ್ತ ಬಸಿಯುವಂತೆ ಮಾಡಿ  ಮನಸ್ಸನ್ನು ಗಟ್ಟಿಗೊಳಿಸಿರುವಿರಿ ಮನುಷ್ಯತ್ವದ  ಮುಖವಾಡ ಪ್ರತಿ ಹಗಲೂ ಇರುಳು ಧರಿಸುವಿರಿ ನಿಮ್ಮ ತಾಯ್ತನದ ವಾತ್ಸಲ್ಯಕೆ ನಾನು ಬದಲಾಗಲಾರೆ