ನಿನ್ನ ಜಾತಿ ಯಾವ್ದು...? ಕವನ ವೆಂಕಟೇಶ ಚಾಗಿ NINNA JAATHI YAVDU KAVITE VENKATESH CHAGI
ನಿನ್ನ ಜಾತಿ ಯಾವ್ದು...? ***** ( ಕವನ ) ನಿರ್ಮಲ ಆಗಸದಿಂದ ಜಿಗಿದು ಬಂದ ನಿರ್ಮಲ ಹನಿಗೆ ಮೊದಲ ಪ್ರಶ್ನೆ ಸಿದ್ದವಾಗಿದೆ ನಿನ್ನ ಜಾತಿ ಯಾವುದು...? ಅಲ್ಲಿಗೆ..... ಮೊದಲ ಮಲಿನ ಮೊದಲ ಇರಿತ ಮೊದಲ ಸಾವು ಹುಟ್ಟಿದಾಗಲೆ..... ಇರಲಿ ಬಿಡು ಈ ಜಗವೇ ಹಾಗೆ ಮತ್ತೊಂದು ಚಕ್ರ ಹೆಜ್ಜೆಗಳ ಸದ್ದು ಅಡಗಿದೆ ಜಾತಿಯ ಧ್ವನಿಗೆ ನಗು... ಅಳು... ಸಿಟ್ಟು.... ದ್ವೇಷ... ಎಲ್ಲವೂ ಇರಿಯುತ ಕೇಳಿವೆ ನಿನ್ನ ಜಾತಿ ಯಾವುದು... ಪೂಜೆ...ಮಡಿ... ಕೊಚ್ಚೆ...ಕೊಳೆ.. ಅಲ್ಲೂ ಇದೆ .. ಇಲ್ಲೂ ಇದೆ ಕಣ್ಣೀರಿಗೂ ಬೇಕಿತ್ತೆ ಜಾತಿಮುದ್ರೆ ನೀರಲ್ಲಿ ನೀರಾದಾಗ ಯಾವ ಹನಿಗಿದೆ ಜಾತಿ ಎಲ್ಲ ಕಣ್ಣಿನ ಬ್ರಾಂತಿ ಹಗಲು ... ಇರುಳು... ಛೇ.. ಇವುಗಳೂ ಇವೆಯಲ್ಲ ಕೇಳಿಬಿಡಿ .. ನಿಮ್ಮ ಜಾತಿ ಯಾವುದು.. ಹುಚ್ಚು ಹುಟ್ಟಿಬಿಟ್ಟಿದೆ ಎಂದೋ ಸಮುದ್ರವಾಗಿದೆ.. ಎಲ್ಲಾ ಹನಿಗಳ ಎಣಿಕೆ ಈಗ ಸಾಗಿದೆ ಪ್ರತಿ ಹನಿಗೂ ಜಾತಿಯ ಮುದ್ರೆ ಬಿದ್ದಿದೆ... ಆದರೆ.... ನೇಸರನ ನೆರಳಿಗೆ ಎಲ್ಲ ಸುಟ್ಟಿದೆ ಆಡಂಬರಗಳು.. ಆತಂಕಗಳು ಆ ಜಾತಿ.. ಈ ಜಾತಿ... ಯಾವುದೂ ಜತೆಗಿಲ್ಲ ಮತ್ತೆ ನಿರ್ಮಲ.... ಮತ್ತೆ ನಿರ್ಮಲ.... ಹನಿಯ ಪಯಣ ನಿರ್ಮಲದೆಡೆಗೆ..